ಗೃಹಿಮ್ಸಾಂಶ-೧
ಅದು ಕ್ರಿ.ಪೂ. ೧೩,೬೪೮ ನೇ ಇಸವಿ. ಅಂದರೆ ಇಂದಿಗೆ ಸುಮಾರು ೧೫೬೭೦ ವರ್ಷಗಳ ಹಿಂದೆ. ನಮಗೆ ಗೊತ್ತಿರುವ ನಾಗರಿಕತೆಗಳ ಹುಟ್ಟಿಗೂ ಬಹಳ ಹಿಂದಿನ ಮಾತು. ಬಹುಷಃ ಇದು ಎಷ್ಟು ಹಿಂದಿನ ಕಾಲ ಎಂಬ ಅರಿವು ಇಲ್ಲಿ ಬರದೆ ಇರಬಹುದು. ಇಂದಿಗೆ ಕ್ರಿಸ್ತ ಹುಟ್ಟಿ ಸುಮಾರು ೨೦೦೦ವರ್ಷಗಳು ಉರುಳಿವೆ ಇದರ ೬ ಪಟ್ಟು ಹಿಂದಿನ ವಾಸ್ತವ್ಯ. ಈ ೨ ಸಹಸ್ರ ವರುಷಗಳ ಮಾಹಿತಿ ನಮಗಿರುವುದು ಅಲ್ಪ. ಅದು ಕ್ರಿಸ್ತನ ಹುಟ್ಟು ಇರಬಹುದು, ರೋಮನ್ನರ ಯುದ್ಧಗಳು ಇರಬಹುದು, ಬುದ್ಧನ ಮಹಾವೀರರ ಹುಟ್ಟು ಆಗಿರಬಹುದು, ಕನ್ನಡ ಸಾಹಿತ್ಯದ ಉಗಮವಾಗಿರಬಹುದು, ಪಂಪ ರನ್ನ ಅವರ ಕಾಲ ಆಗಿರಬಹುದು, ಶಂಕರಾಚಾರ್ಯರು ಸನಾತನ ಧರ್ಮದ ಪ್ರಚಾರ ಮಾಡಿರಬಹುದಾದ ಅರಿವಿರಬಹುದು, ಕನ್ನಡ ರಾಜರ ಆಳ್ವಿಕೆಯಗಿರಬಹುದು, ವಚನ ಸಾಹಿತ್ಯದ ಉಗಮವಿರಬಹುದು, ಮೊಘಲರ ಆಳ್ವಿಕೆ, ನಂತರ ಬ್ರಿಟೀಷರ ವಸಾಹತುಶಾಹಿಯ ಕಾಲವಾಗಿರಬಹುದು, ನ್ಯೂಟನ್ನಿನ ಸಿದ್ಧಾಂತಗಳು, ವಿದ್ಯುತ್ತಿನ ಆವಿಷ್ಕಾರ, ಕೈಗಾರಿಕಾ ಕ್ರಾಂತಿ, ಸ್ವಾತಂತ್ರ್ಯ ಸಂಗ್ರಾಮ, ಗಾಂಧಿಯವರ ತತ್ವಗಳು, ಸ್ವಾತಂತ್ರ್ಯ, ಸ್ವಾತಂತ್ರ್ಯ ನಂತರದ ದಿನಗಳು, ಆಧುನಿಕ ಜಗತ್ತು, ಕಂಪ್ಯೂಟರ್ ಯುಗ ಮತ್ತು ಈಗಿನ ಸ್ಮಾರ್ಟ್ಫೋನ್ ಜೀವನ. ಇದು ಕೇವಲ ೨ ಸಾವಿರ ವರ್ಷಗಳ ಒಂದು ತುಣುಕು ಅಷ್ಟೆ. ಇದರ ೬ ಪಟ್ಟು ಕಾಲದ ಹಿಂದೆ ಎಂದರೆ ಅದು ಊಹೆಗೂ ನಿಲುಕದ್ದು. ಆ ಕಾಲಾಂತರದಲ್ಲಿ ಆದ ಬದಲಾವಣೆ, ಅದು ಕಲ್ಪನಾತೀತ. ಆದರೂ ಹೀಗೊಂದು ಊಹೆ ಮಾಡುತ್ತಿರುದು ಕೇವಲ ನನ್...