ನಿರಾಕಾರಣಾಂತರ

ಎಂದೂ ಬರೆಯದಿದ್ದ ನಾನು ನನಗೆ ನನ್ನಲೊಬ್ಬ ಲೇಖಕನಿರುವುದು ಗೊತ್ತಾಗಿದ್ದೆ ಆಕೆಯಿಂದ. ಈ ಬರಹವನ್ನು ಅವಳಿಗೇ  ಅರ್ಪಿಸುತ್ತೇನೆ. ಈ ಬರಹವು ಕೇವಲ ನನ್ನ ಒಳಗಿರುವ ಭಾವನೆಗಳನ್ನು ವ್ಯಕ್ತಪಡಿಸುವ ಸಲುವಾಗಿ. ಇಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತ ಭಾವನೆಗಳಿಗೆ ಪ್ರವೇಶವಿಲ್ಲ.

ಇಂದಿಗೆ ಬಹುಷಃ 8 ದಿನಗಳಾಗಿರಬಹುದು ಆ ದಿನ, ಆ ಕರಾಳ ರಾತ್ರಿ ಕಳೆದು. ಆಕೆ ಆ ರಾತ್ರಿ ಪೂರ್ತಿ ಕಣ್ನೀರಿಡುತ್ತಿದ್ದಳು. ಆ ಕಣ್ಣೀರು ಆವಿಯಾಗಿ ಘನೀಭವಿಸಿ ಸರಾಗವಾಗಿ ಮಳೆ ಆಗಿದ್ದು ನಾನು ಅಚಾನಕ್ಕಾಗಿ, ಅದು ಚಳಿಗಾಲದಲ್ಲಿ ಬೀರಿದ ಬಿರು ಬಿಸಿಲಿನ ತೀಕ್ಷ್ಣ ನಿರ್ಧಾರಗಳ ಪ್ರಕಾಶತೆಗೆ. ಹೌದು, ಅಷ್ಟು ದಿನದಿಂದ ನಾವಿಬ್ಬರು ಯಾವುದೇ ಚಿಂತೆಗಳ ಸುಳಿಗೆ ಸಿಲುಕದೆ ಇಬ್ಬರು ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ಮಾತಾಡಿಸುತ್ತ(WhatsApp ಅಲ್ಲಿ) ಇದ್ದ್ವಿ. ಆದರೆ ಆಕೆ ಯಾವಾಗ ತನಗೆ ಬಂದ ಗಂಡುಗಳನ್ನ ತಿರಸ್ಕರಿಸುತ್ತ ನನ್ನಲ್ಲಿ ತಲ್ಲೀನಲಾಗಳು ಅಣಿಯಾದಳೋ, ಆಗ ನಾನು ಮಂಜಿನಂತೆ ಘನವಾಗುತ್ತಿದ್ದ ಆ ಆಕರ್ಷಣೆಗೆ ಬೆಂಕಿಯ ಬೀರಿ ಕರಗಿಸಬೇಕಾಗಿ ಬಂತು.

ಒಂದು ಅಪೂರ್ವವಾದ ಸಂಬದದ ಕೊನೆಗೆ ಇತಿಶ್ರೀ ಹಾಡಿದ ನನಗೆ ಒಂದು ಧಿಕ್ಕಾರವಿರಲಿ. ಆ ಹಸಿಮನಸಿಗೆ ಘಾಸಿ ಮಾಡಿದ ಈ ಕೈಗಳಿಗೆ ಅವಳ ನೆನಪು ಎಂದೂ  ಸವೆಯದಿರಲಿ. ಆಕೆಯ ಕನ್ಗಳಲ್ಲಿ ಬಿಕ್ಕಿ ಬಂದ ಆ ಕಣ್ಣೀರ ಕೊಡಿಗೆ ಕಾರಣೀಭೂತನಾದ ನನ್ನ ದೂರಾಲೋಚನೆಗೆ ಎಷ್ಟೇ ದೂರವಾದರೂ ಅವಳ ಯೋಚನೆ ದೂರವಾಗದಿರಲಿ. ಕೋಗಿಲೆ ಕಂಠದಿ ರಾತ್ರಿಯೆಲ್ಲಾ ಅಳಸಿದ ಆ ಹೇಡಿತನವು ಮುಂದೆಂದೂ ನನ್ನಲಿ ಸುಳಿಯದಿರಲಿ. ಬಿಕ್ಕಳಿಸಿ ಬರುವ ಆಕೆಯ ಉಸಿರಿಗೆ ಉಸಿರಾಗದ ಈ ಉಸಿರಿಗೆ ಆಕೆಯ ನೆನಪು ಉಸಿರಿರುವವರೆಗೂ ಉಸಿರೊಂದಿಗಿರಲಿ.

ಹೌದು ಇದೊಂದು ಅಪರೂಪದ ಸಂಬಂಧದ ಬೆಸುಗೆ.

ಕುಡಿದು ಪಾನಮತ್ತಾಗಿ ರಾತ್ರಿಪಾಳೆಯ ನಡೆಸುವಾಗ ಜೊತೆಯಲ್ಲಿದ್ದ ಮತ್ತಿಬ್ಬ ಸ್ನೇಹಿತರ ನಡುವೆ ಯಾರು ಹಿತವರೆಂದು ಕೇಳಲು ಆಕೆಗೆ ನಾನು ಕರೆ ಮಾಡಿದ್ದು ರಾತ್ರಿ 3:30ಕ್ಕೆ. ಆಗ ನನ್ನೊಡನಿದ್ದ  ಉಳಿದವರಿಗೆ ಎಚ್ಚರವಾಗುವ ಮೊದಲೇ ನಾನು ಆಕೆಗೆ ಕರೆ ಮಾಡಾಗಿತ್ತು. ಮೊದಲೇ ರಾತ್ರಿ ನಿದ್ದೆ ಇಂದ ಬಳಲುವ ಆಕೆ ಈ ಕರೆಯಿಂದ ಪೆಚ್ಚಾಗಿ ನಿದ್ದೆಯಿಂದೆದ್ದು ಏನೆಂದು ಕೇಳಲು ನಾನು ಅವಳಲ್ಲಿ, ಇರುವ ವಿಷಯ ಬಿಟ್ಟು ಹೆದರಿ ಇನ್ನೇನೋ ಕೆಳಿದೆ. ಆಕೆಗೆ ತದನಂತರ ಪಾಪ ನಿದ್ದೆಯ ಸುಳಿವೂ ಇಲ್ಲದಂತಾಗಿತ್ತು. ನಂತರ ಮಾರನೆ ದಿನ ಅವಳಲ್ಲಿ ಕ್ಷಮೆಯಾಚಿಸುವ ಸಲುವಾಗಿ ಶುರುಮಾಡಿದ ಮೆಸ್ಸೇಜಸ್ಸಿನ ಪ್ರವಾಹ, ಅಂದು, ಎಲ್ಲರು ಪ್ರೇಮಿಗಳ ದಿನವೆಂದು ಆಚರಿಸುವ ದಿನದಂದು ಆಣೆಕಟ್ಟಿಗೆ ಬಂದು ನಿಂತಂತಾಯಿತು. ನಂತರ ಒಂದೆರಡು ಬಾರಿ ಮೆಸ್ಸೇಜಸ್ ಗಳನ್ನು ಮಾಡಿದರೂ ಅದು ಕೇವಲ ಔಪಚಾರಿಕವಷ್ಟೆ.

ಈ ಸಂಬಂದ ಮುಂದುವರಿಯುವುದಿಲ್ಲವೆಂದೂ, ಅದನ್ನು ಮೊಟಕುಗೊಳಿಸಬೇಕು ಅಂತ ಇಬ್ಬರಿಗೂ ಗೊತ್ತಿದ್ದರೂ, ಇಬ್ಬರೂ ಅದನ್ನು ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲವೆನ್ನುವುದು ಅಷ್ಟೇ ನಿಜ. ನಂತರ ನಾನು ಮಾತಾಡಬಾರದೆಂದು ನಿಶ್ಚಯ ಮಾಡಿದೆ. ನನಗೆ ಅವಳ ನೆನಪು ಸಾಕಷ್ಟು ಕಾಡಿದರೂ ನಾನು ಅದನ್ನು ತೊರ್ಪಡಿಸಲಿಲ್ಲ. ಆಕೆಗೆ ನನ್ನ ತಟಸ್ಥ ಮೆಸ್ಸೇಜ್ ಗಳನ್ನು ನೋಡಿ ಇನ್ನಷ್ಟು ನೋವಾಗುತ್ತಿತ್ತೆಂದು ನಂತರ ನನಗೂ ತಿಳಿಯಿತು. ನಾವು ಮುಂಚೆ ಚಾಟ್ ಮಾಡುತ್ತಿದ್ದಂತೆ ಈಗ ಚಾಟ್ ಮಾಡುತ್ತಿರಲಿಲ್ಲ. ಹೆಚ್ಚು ಕಮ್ಮಿ ದಿನವೆಲ್ಲ ಚಾಟ್ ಮಾಡ್ತಾ ಇದ್ದೋರು ಇದ್ದಕ್ಕಿದ್ದಂತೆ ಒಂದು ಪ್ರಭಲವಾದ ಯಾವುದೇ ಕಾರಣ ಇಲ್ಲದೆ ನಿಲ್ಲಿಸಿದ್ದಕ್ಕೆ ಇಬ್ಬರೂ ತುಂಬಾ ಮಿಸ್ ಮಾಡ್ಕೊಳ್ತಾ ಇದ್ವಿ. ಆದರೆ ತೋರ್ಸ್ಕೊಳ್ತಾ ಇರ್ಲಿಲ್ಲ. ಅವಳಿಗೆ ಇದು ತುಂಬಾನೆ ಕಷ್ಟ ಆಗ್ತಿತ್ತು. ಐಡಿಯ ನಾವು ಸಜೆಸ್ಟ್ ಮಾಡಿದ್ದಕ್ಕೆ ನಾನು ಹೇಗೋ ತಡ್ಕೊಳ್ತ ಇದ್ದೆ ಪಾಪ ಅವಳಿಗೆ ಏನು ಮಾಡ್ದೆ ಈ ಪರೀಕ್ಷೆ ಎದುರಿಸಬೇಕಾಗಿ ಬಂದಿತ್ತು. ಅವಳು ವಿಧಿ ಇಲ್ಲದೆ ಸುಮ್ನಿರ್ತಿದ್ಳು. ಅಲ್ಲಿ ಸಾಕಷ್ಟು ಹೊರಾಟ ಮಾಡಿ ಈಗ ಅವಳಿಗೆ ಹುಡ್ಗನ್ ಹುಡ್ಕೋ ಕಾರ್ಯಕ್ರಮ ಭರದಿಂದ ಸಾಗ್ತಾ ಇದೆ. ಅವ್ಳು ಆದಷ್ಟು ಬೇಗ ಒಳ್ಳೆ ಮನೆ ಸೇರ್ಕೊಳ್ಲಿ ಅಂತ ಆಶಿಸುತ್ತೇನೆ.



 ಈ ಕಥೆಯಲ್ಲಿ ನನಗೆ ಸಾಕಷ್ಟು ಅನುಭವಗಳು ಆಗಿವೆ. ಭಾವನೆಗಳ ಜೊತೆ ಬೆಸೆದಿದ್ದೇನೆ. ನನ್ನ ಜೀವನದಲ್ಲಿ ಮೊದಲ ಬಾರಿ ಹುಟ್ಟಿದಂತ ಭಾವನೆಗಳಿಗೆ ನನ್ನದೊಂದು ನಮನ. ನನ್ನ ಮನದಾಳಕ್ಕೆ ಮೆಟ್ಟಿಲುಗಳ ಸಹಾಯವಿಲ್ಲದೆ ಇಳಿದ ಅವಳಿಗೆ ನನ್ನದೊಂದು ಸಲಾಮ್. ಇನ್ನೊಬ್ಬ ಫ್ರೆಂಡ್ ಳ ಮದುವೆಯಲ್ಲಿ ಸಿಕ್ಕು ಇಡೀ ದಿನ ಒಂದೇ ಒಂದು ಮಾತಾಡಿಸದೇ ರೈಲ್ವೇ ಸ್ಟೇಷನ್ನಲ್ಲಿ ಹೊರಡುವಾಗ bye ಹೇಳುವ ಸಮಯದಲ್ಲಿ ನಮ್ಮಿಬ್ಬರ ನಡುವೆ ಆ ಒಂದು ಕ್ಷಣದಲ್ಲಿ ನೆಟ್ಟ ಕಣ್ಣಿನ ದೃಷ್ಟಿಯಲ್ಲಿ ಆದ ಖುಷಿ-ದುಃಖ ಮರೆಯುವುದುಂಟೆ. ಆಮೇಲೆ ಆವತ್ತು ಮಾತಡಿಸಲಾಗದ ಕಾರಣಕ್ಕೆ ಪರಿತಪಿಸಿದ್ದು ಎಷ್ಟೊಂದು ಆಹ್ಲಾದಕರ. ನಾವು ನಮ್ಮನ್ನು ಇನ್ನೊಬ್ರು ಮಿಸ್ ಮಾಡ್ಕೊಳ್ತಾ ಇರೋದುನ್ನ ನೋಡಿದ್ರೆ ಎಷ್ಟೊಂದು ಸಂತೃಪ್ತಿಯ ಭಾವನೆ ಬೆಳ್ಸ್ಕೊತೀವಿ ಅಲ್ವಾ. ಹುಡು-ಹುಡುರಲ್ಲೇ ಇಷ್ಟೊಂದು ಆತ್ಮೀಯತೆ ಇದ್ರೂ, ಅದು ಅಷ್ಟೊಂದು ಉತ್ಕೃಷ್ಟವಾಗಿರೋದಿಲ್ಲ.

ಮುಂದೊಂದು ದಿನ ಅವಳ ಮದುವೆಯ ಕರೆಯೋಲೆಗೆ ಓಗೊಟ್ಟು ಮದುವೆ ಮುಗಿಸಿ ವಿದಾಯ ಹೇಳಿದ ಅನಂತರ ಕತೆಗೆ ಪೂರ್ಣ ವಿರಾಮ


ಕಾಮೆಂಟ್‌ಗಳು