ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿರಾಕಾರಣಾಂತರ

ಎಂದೂ ಬರೆಯದಿದ್ದ ನಾನು ನನಗೆ ನನ್ನಲೊಬ್ಬ ಲೇಖಕನಿರುವುದು ಗೊತ್ತಾಗಿದ್ದೆ ಆಕೆಯಿಂದ. ಈ ಬರಹವನ್ನು ಅವಳಿಗೇ  ಅರ್ಪಿಸುತ್ತೇನೆ. ಈ ಬರಹವು ಕೇವಲ ನನ್ನ ಒಳಗಿರುವ ಭಾವನೆಗಳನ್ನು ವ್ಯಕ್ತಪಡಿಸುವ ಸಲುವಾಗಿ. ಇಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತ ಭಾವನೆಗಳಿಗೆ ಪ್ರವೇಶವಿಲ್ಲ. ಇಂದಿಗೆ ಬಹುಷಃ 8 ದಿನಗಳಾಗಿರಬಹುದು ಆ ದಿನ, ಆ ಕರಾಳ ರಾತ್ರಿ ಕಳೆದು. ಆಕೆ ಆ ರಾತ್ರಿ ಪೂರ್ತಿ ಕಣ್ನೀರಿಡುತ್ತಿದ್ದಳು. ಆ ಕಣ್ಣೀರು ಆವಿಯಾಗಿ ಘನೀಭವಿಸಿ ಸರಾಗವಾಗಿ ಮಳೆ ಆಗಿದ್ದು ನಾನು ಅಚಾನಕ್ಕಾಗಿ, ಅದು ಚಳಿಗಾಲದಲ್ಲಿ ಬೀರಿದ ಬಿರು ಬಿಸಿಲಿನ ತೀಕ್ಷ್ಣ ನಿರ್ಧಾರಗಳ ಪ್ರಕಾಶತೆಗೆ. ಹೌದು, ಅಷ್ಟು ದಿನದಿಂದ ನಾವಿಬ್ಬರು ಯಾವುದೇ ಚಿಂತೆಗಳ ಸುಳಿಗೆ ಸಿಲುಕದೆ ಇಬ್ಬರು ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ಮಾತಾಡಿಸುತ್ತ(WhatsApp ಅಲ್ಲಿ) ಇದ್ದ್ವಿ. ಆದರೆ ಆಕೆ ಯಾವಾಗ ತನಗೆ ಬಂದ ಗಂಡುಗಳನ್ನ ತಿರಸ್ಕರಿಸುತ್ತ ನನ್ನಲ್ಲಿ ತಲ್ಲೀನಲಾಗಳು ಅಣಿಯಾದಳೋ, ಆಗ ನಾನು ಮಂಜಿನಂತೆ ಘನವಾಗುತ್ತಿದ್ದ ಆ ಆಕರ್ಷಣೆಗೆ ಬೆಂಕಿಯ ಬೀರಿ ಕರಗಿಸಬೇಕಾಗಿ ಬಂತು. ಒಂದು ಅಪೂರ್ವವಾದ ಸಂಬದದ ಕೊನೆಗೆ ಇತಿಶ್ರೀ ಹಾಡಿದ ನನಗೆ ಒಂದು ಧಿಕ್ಕಾರವಿರಲಿ. ಆ ಹಸಿಮನಸಿಗೆ ಘಾಸಿ ಮಾಡಿದ ಈ ಕೈಗಳಿಗೆ ಅವಳ ನೆನಪು ಎಂದೂ  ಸವೆಯದಿರಲಿ. ಆಕೆಯ ಕನ್ಗಳಲ್ಲಿ ಬಿಕ್ಕಿ ಬಂದ ಆ ಕಣ್ಣೀರ ಕೊಡಿಗೆ ಕಾರಣೀಭೂತನಾದ ನನ್ನ ದೂರಾಲೋಚನೆಗೆ ಎಷ್ಟೇ ದೂರವಾದರೂ ಅವಳ ಯೋಚನೆ ದೂರವಾಗದಿರಲಿ. ಕೋಗಿಲೆ ಕಂಠದಿ ರಾತ್ರಿ...